ಶುಕ್ರವಾರ, ಸೆಪ್ಟೆಂಬರ್ 9, 2011

ಮೈಸೂರು ದಸರಾ ಎಲ್ಲೆಲ್ಲೂ ಶೃಂಗಾರ

ವಿಕ ಸುದ್ದಿಲೋಕ ಮೈಸೂರು
ನಾಡ ಹಬ್ಬ ದಸರಾ ಹತ್ತಿರವಾಗುತ್ತಿರುವಂತೆಯೇ ಮೈಸೂರು ಶೃಂಗಾರಗೊಳ್ಳುತ್ತಿದೆ.
ಭಿತ್ತಿಪತ್ರ, ಪೋಸ್ಟರ್, ನಾನಾ ಬರಹಗಳಿಂದ ತುಂಬಿರುತ್ತಿದ್ದ ಕಟ್ಟಡಗಳ ಗೋಡೆ ರಂಗು ಪಡೆದುಕೊಳ್ಳಲಾರಂಭಿಸಿವೆ.
ದಸರಾ ಹಾಗೂ ಮೈಸೂರಿನ ಪರಂಪರೆಯನ್ನು ಬಿಂಬಿಸುವ ಚಿತ್ರಕಲೆ ಸರಕಾರದ ಕಟ್ಟಡಗಳಲ್ಲಿ ಮೂಡಲಿದ್ದು, ನೋಡುಗರಿಗೆ ಮುದ ನೀಡಲು ಸಿದ್ಧವಾಗುತ್ತಿವೆ. ಇದಕ್ಕಾಗಿ ೩೦ ಮಂದಿ ಕಲಾವಿದರ ತಂಡ ಕಲ್ಪನೆಗೆ ಮೂರ್ತ ರೂಪ ನೀಡಲಾರಂಭಿಸಿದ್ದಾರೆ. ನಗರಪಾಲಿಕೆಯಿಂದ ಕೈಗೊಂಡಿರುವ ಈ ವರ್ಣಾಲಂಕಾರದ ಹೊಣೆಹೊತ್ತಿರುವ ಪಾಪು ಆರ್ಟ್ಸ್‌ನ ಲೋಕೇಶ್ ನೇತೃತ್ವದಲ್ಲಿ ಕಲಾವಿದರು  ಚಿತ್ರ ಬಿಡಿಸುತ್ತಿದ್ದಾರೆ.


ಗುರುವಾರ, ಜುಲೈ 28, 2011



ದಸರೆ ಉದ್ಘಾಟನೆಗೆ ಪೇಜಾವರ ಶ್ರೀ

ವಿಕ ಸುದ್ದಿಲೋಕ ಬೆಂಗಳೂರು
ಈ ಬಾರಿಯ ಮೈಸೂರು ದಸರಾ ಮಹೋತ್ಸವವನ್ನು ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಉದ್ಘಾಟಿಸ ಲಿದ್ದಾರೆ.
ದಸರಾ ಸಿದ್ಧತೆ ಕುರಿತು ವಿಧಾನಸೌಧದಲ್ಲಿ ಸೋಮವಾರ ನಡೆದ ಉನ್ನತ ಸಭೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಈ ವಿಷಯ ಪ್ರಕಟಿಸಿದರು. ೮೦ ವರ್ಷ ಪೂರೈಸಿರುವ ಪೇಜಾವರ ಶ್ರೀಗೆ ಗೌರವ ಸೂಚಿಸುವ ಸಲುವಾಗಿ ದಸರಾ ಉದ್ಘಾಟಿಸಲು ಆಹ್ವಾನಿಸಲಾಗುವುದು ಎಂದು ತಿಳಿಸಿದರು.
ಎಂದಿನಂತೆ ವಿಜೃಂಭಣೆಯಿಂದಲೇ ನಾಡಹಬ್ಬ ದಸರಾ ಆಚರಿಸಲು ಸಭೆ ನಿರ್ಧರಿಸಿತು. ಅಲ್ಲದೆ ಮೈಸೂರು ನಗರದ ಪ್ರಮುಖ ರಸ್ತೆಗಳ ಜತೆಗೆ ಒಳ ರಸ್ತೆಗಳ ಡಾಂಬರೀಕರಣ ನಡೆಸು ವುದು ಸೇರಿದಂತೆ ಸಿದ್ಧತೆಗಾಗಿ ಹತ್ತು ಕೋಟಿ ರೂ. ಬಿಡು ಗಡೆ ಮಾಡುವುದಾಗಿ ಮುಖ್ಯಮಂತ್ರಿ ಹೇಳಿದರು. ಸಭೆ ಆರಂಭದಲ್ಲಿ ವಿಷಯ ಪ್ರಸ್ತಾಪಿಸಿದ ಎಚ್.ಎಸ್. ಶಂಕರಲಿಂಗೇಗೌಡರು, ನಗರದ ರಸ್ತೆಗಳು ಗುಂಡಿ ಬಿದ್ದು ಹಾಳಾಗಿವೆ. ಪ್ರಮುಖ ರಸ್ತೆಗಳನ್ನಷ್ಟೇ ಡಾಂಬರೀಕರಣ ಮಾಡಿದರೆ ಸಾಲದು, ಒಳರಸ್ತೆಗಳ ಗುಂಡಿ ಮುಚ್ಚಿ. ನಂತರ ದಸರಾ ಆಚರಣೆ ಮಾಡಿ ಎಂದರು.